ಕನ್ನಡ ನಾಡು | Kannada Naadu

ಉಡುಪಿ ಜಿಲ್ಲಾ ಕಸಾಪ ವತಿಯಿಂದ  ಕನ್ನಡ ರಾಜ್ಯೋತ್ಸವ ಸಂಭ್ರಮ

02 Nov, 2024



       ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಕಾಯ೯ಕ್ರಮ ಎಂ.ಜಿ.ಎಂ ಕಾಲೇಜಿನ ಮುಂಭಾಗದ ಆಟೋ ನಿಲ್ದಾಣದಲ್ಲಿ ನ.1 ರಂದು ನಡೆಯಿತು. ಈ ಸಂದಭ೯ದಲ್ಲಿ ಎಲ್ಲಾ ರಿಕ್ಷಾಗಳಿಗೆ ಕನ್ನಡ ಧ್ವಜ ನೀಡಿ ಸಿಂಗರಿಸಲಾಯಿತು.
        ಕನ್ನಡ ಧ್ವಜ ಹಸ್ತಾಂತರಿಸಿ ಮಾತನಾಡಿದ, ಕಸಾಪ ಜಿಲ್ಲಾ ಕಾಯ೯ಕಾರಿ ಸದಸ್ಯ ಭುವನ ಪ್ರಸಾದ್ ಹೆಗ್ಡೆ, ರಾಜ್ಯೋತ್ಸವ ನಾಡಿನ ಶ್ರೇಷ್ಠ ಹಬ್ಬವಾಗಿದೆ. ನಮ್ಮ ನಾಡು ನುಡಿ ಸಂಸ್ಕೃತಿಗಾಗಿ ನಾವೆಲ್ಲರೂ ಕಟಿಬದ್ಧರಾಗಿ ಕಾಯ೯ ನಿವ೯ಹಿಸಬೇಕು ಈ ನಿಟ್ಟಿನಲ್ಲಿ ಕಸಾಪದ ಕಾಯ೯ ಶ್ಯಾಘನೀಯ ಎಂದರು.
     ಬ್ರಹ್ಮಾವರ ತಾಲೂಕು ಕಸಾಪ ಪೂವ೯ ಅಧ್ಯಕ್ಷ ನಾರಾಯಣ ಮಡಿ ನಮ್ಮ ರಾಜ್ಯ ನಮ್ಮ ದೇಶದಲ್ಲಿ ಅಪೂರ್ವದ ರಾಜ್ಯವಾಗಿದ್ದು ಭಾಷಾವಾರು ಪ್ರಾಂತ್ಯದ ಒಗ್ಗೂಡಿಸಿದ ಬಳಿಕ ನಮ್ಮ ರಾಜ್ಯ 68ನೇ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಕನ್ನಡ ಭಾಷೆಯು ನಮ್ಮೆಲ್ಲರ ಮನೆ ಮನದಲ್ಲಿರಬೇಕು ಎಂದರು. 
     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರಾದ ರವಿ, ಕಸಾಪ ತಾಲೂಕು ಗೌರವ ಕಾಯ೯ದಶಿ೯ಗಳಾದ ಜನಾದ೯ನ್ ಕೊಡವೂರು, ರಂಜನಿ ವಸಂತ್, ಗೌ.ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಶ್ರೀನಿವಾಸ ರಾವ್, ವಸಂತ್, ಸುಮಿತ್ರ ಕೆರೆಮಠ, ರಾಮಾಂಜಿ, ವಿರಣ್ಣ ಕುರುವತ್ತಿಗೌಡರ್, ಮುಂತಾದವರಿದ್ದರು. ರಾಘವೇಂದ್ರ ಕವಾ೯ಲು ನಿರೂಪಿಸಿ ದರು. ಸಂಯೋಜಕ ಉಮೇಶ್ ಆಚಾಯ೯ ವಂದಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by